Mahadevi_Assignment-10
ಅಸೈನ್ಮೆಂಟ್-10
ಮಹಾದೇವಿ ಸಹ ಶಿಕ್ಷಕಿ (ಸಮಾಜ ವಿಜ್ನ್ಯಾನ )ಸರ್ಕಾರಿ ಪ್ರೌಢ ಶಾಲೆ ಹಳ್ಳಿಖೇಡ ಬಿ. ಹುಮ್ನಾಬಾದ್ ತಾಲುಕ.
ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ (ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ:-
*ಮಕ್ಕಳೊಂದಿಗೆ ಹಾಗೂ ಪೋಷಕರೊಂದಿಗೆ ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದು ಕೋವಿಡ್-19ರ ಮುಂಜಾಗೃತಾ ಕ್ರಮಗಳನ್ನು ತಿಳಿಸಿಕೊಡುವುದು.(ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಕೈ ತೊಳೆಯುವ ವಿಧಾನ ಹೇಳಿಕೊಡುವುದು ಇತ್ಯಾದಿ.)
*ಮಕ್ಕಳಿಗೆ ಮೊಬೈಲ್ ಕಂಪ್ಯೂಟರ್ ಬಳಸುವುದನ್ನು ತಿಳಿಸಿಕೊಡುವುದು(ಪೋಷಕರ ನಿಗಾ:ದಲ್ಲಿ).
*ಪಾಠಗಳು ಓದಲು ಅನುಕೂಲವಾಗುವಂತೆ ಗೂಗಲ್,ಆಪ್ ಡೌನ್ಲೋಡ್, ಲಿಂಕ್ ಬಳಸುವುದು, ಯೌಟ್ಯೂಬ್ ವೀಕ್ಷಣೆ, ಆಡಿಯೋ-ವಿಡಿಯೋ ಬಳಕೆ ಬಗ್ಗೆ ತಿಳಿಸಿಕೊಡುವುದು.
*ಇಲಾಖೆಯ ನಿರ್ದೇಶನದಂತೆ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ತಿಳಿಸುವುದು ಅಥವಾ ಲಿಂಕ್ ನೀಡುವುದು(NCERT,DSERT,SHAGUN, DIKSHA ಇತ್ಯಾದಿ.).
*ಪೂರಕ ಪುಸ್ತಕಗಳ ಲಿಂಕ್ ನೀಡುವುದು(ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇ-ಕಣಜ ಬಳಸಬಹುದು)
*ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಸಾಧ್ಯವಾದರೆ ಇಲಾಖೆಯಿಂದಲೇ TAB ನೀಡುವುದು.
*ದೂರದರ್ಶನ, ರೇಡಿಯೋ ಮುಂತಾದ ಸಮೂಹ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು. ಹಾಗೆ ಕಾರ್ಯಕ್ರಮಗಳನ್ನು ರೂಪಿಸುವುದು.(ಮೊಬೈಲ್ ಸಂಪರ್ಕ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಸರಿಯಾಗಿ ಲಭ್ಯವಿಲ್ಲ).
*ಇಲಾಖೆಯಿಂದಲೇ ಶೈಕ್ಷಣಿಕ ಚಾನ್ನೆಲ್ಗಳನ್ನು ಪ್ರಾಂಭಿಸುವುದು.
*ಈಗಾಗಲೇ whatsapp group ಗಳನ್ನು ಮಾಡಿಕೊಂಡಿದ್ದು ಇವುಗಳ ಮುಖಾಂತರ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು.
*ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಲಕ ಪೋಷಕರ ಜವಾಬ್ದಾರಿ ಅತಿ ಹೆಚ್ಚಾಗಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು.
Comments
Post a Comment