Mahadevi_assignment-9

ಅಸೈನ್ಮೆಂಟ್ -9
ಮಹಾದೇವಿ ಸಹಾಯಕ ಶಿಕ್ಷಕಿ ಸರ್ಕಾರಿ ಪ್ರೌಢ ಶಾಲೆ ಹಳ್ಳಿಖೇಡ ಬಿ. ತಾ!! ಹುಮನಾಬಾದ. 

ಬದಲಾವಣೆ ಸಹಜ, ಬದಲಾವಣೆ ಜಗದ ನಿಯಮ. ಹಗಲು ರಾತ್ರಿ, ಬಿಸಿಲು ಮಳೆ, ಬೇಸಿಗೆ ಮಳೆಗಾಲ ಚಳಿಗಾಲ, ಹೀಗೆ ಕಾಲವು ಬದಲಾದಂತೆ ಪರಿಸ್ಥಿತಿಗನುಗುಣವಾಗಿ ಬದಲಾಗುವುದು ಒಳಿತು. ಬದಲಾದರೆ ಮಾತ್ರ ಉಳಿದೆವು. ಬದುಕಬಲ್ಲೆವು. 2019ರ ಡಿಸೆಂಬರ್ ತಿಂಗಳಲ್ಲಿ ಉಹಾನ್ ಚೀನಾದಲ್ಲಿ ಕಾಣಿಸಿ ಇಡೀ ಜಗತ್ತಿಗೆ ಈಗ ಮಹಾಮಾರಿ ವ್ಯಾಪಿಸಿದೆ. ಮೊದಲಿಗೆ ತುಂಬಾ ಕಟ್ಟುನಿಟ್ಟಾಗಿ ಲೊಕ್ಡೌನ್ ಆರಂಭಿಸಿ ನಂತರ ಇದು ಮುಗಿಯದು ಎಂದಾದಾಗ ಅದರೊಂದಿಗೆ ಬದುಕುವುದು ಎಂದು ಈಗ ನಮ್ಮ ಬದುಕು ಮಹಾಮಾರಿಯೊಂದಿಗೆ ಎಂಬುದು ಬಹುತೇಕ ನಿಶ್ಚಯವಾಗಿದೆ. ಶಿಕ್ಷಕರು ತಮ್ಮ ಇಲಾಖೆಯ ಆದೇಶದಂತೆ ನವೀನ ತಂತ್ರಜ್ನ್ಯಾನ ಬಳಸಿಕೊಂಡು (ಗೂಗಲ್ ಮೀಟ್, ಬ್ಲಾಗರ್, ವಾಟ್ಸ್  ಆಪ್ ಮುಂತಾದ ಆಪ್ ಗಳನ್ನು )ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಹೊರಜಗತ್ತಿನಲ್ಲಿ ಮನೆಯಿಂದಲೇ ನವೀನ ತಂತ್ರಾಗ್ನ್ಯಾನ್ ಬಳಸಿಕೊಂಡು ಪಾಠ ಕೇಳುತ್ತಿದ್ದಂತೆ ಮಹಾಮಾರಿಯಿಂದ ನಮ್ಮಲ್ಲೂ ಮಾಡುವಂತಾಗಿದೆ. ಇಲಾಖೆಯಿಂದ ಕಾಲ ಕಾಲಕ್ಕೆ ಕೊಟ್ಟ ಕಂಪ್ಯೂಟರ್ ತರಬೇತಿ ತುಂಬ ಸಹಕಾರಿಯಾಗಿದೆ. ಬದಲಾದ ಸನ್ನಿವೇಶದಲ್ಲಿ ಮೊಬೈಲ್, ಕಂಪ್ಯೂಟರ್ ಬಳಸಿಕೊಂಡು ಮಕ್ಕಳ ವಿದ್ಯಾಭ್ಯಾಸ ಉತ್ತಮಗೊಳಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ.ಮಹಾಮಾರಿಯಿಂದ ಜಗತ್ತು ಸ್ತಬ್ಧ ವಾಗುವುದೇನೋ ಎಂಬಂತಿದ್ದ ಸಂದರ್ಭದಲ್ಲಿ ಅಂಗೈಯಗಲದ ಮೊಬೈಲ್ ಎಲ್ಲವನ್ನು ಆವರಿಸಿತು. ಇಡೀ ಇಲಾಖೆಯ ಕೊಂಡಿಯನ್ನು ಬೆಸೆಯಿತು. ಅಲ್ಲದೆ ಇಲಾಖೆಯ ಅದ್ಭುತ ಶ್ರಮವನ್ನು ಅನಾವರಣಗೊಳಿಸಿತು. ಯೌಟ್ಯೂಬ್, ಆಡಿಯೋ, ವಿಡಿಯೋ, ವೆಬ್ಸೈಟ್, ಲಿಂಕ್, ಆಪ್ಗಳು ಬಳಸಿಕೊಂಡು ಪರಿಣಾಮಕಾರಿ ಪಾಠ ಭೋದನೆ   ಮಾಡುವಂತಾಗಿದ್ದು ಹೀಗೂ ಮಾಡಬಹುದು ಎಂಬಂತಾಗಿದೆ.  ಮನೆಯೇ ಮೊದಲ ಪಾಠಶಾಲೆ ಎಂಬುದು ಮನೆಯೇ ಮಕ್ಕಳಿಗೆ ಶಾಲೆಯಾಯಿತು. ಪೋಷಕರು ಮಕ್ಕಳಿಗೆ ಮೊಬೈಲ್ ಕೊಡಿಸುವುದು ಪಾಠ ಕೇಳಲು ಅನುವು ಮಾಡಿಕೊಡುವುದು. ವಿವಿಧ ಆಪ್ ಲಿಂಕ್ ಗಳನ್ನು ಮಕ್ಕಳಿಗೆ ತೆರೆದು ಕೊಡುವುದು ಮಕ್ಕಳ ಕಲಿಕೆಯ ಬದಲಾದ ದಿನಚರಿ ವಿಧಾನಕ್ಕೆ ಒಗ್ಗಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು. ಜೊತೆಗೆ ಇಲಾಖೆಯ ನಿರ್ದೇಶನದಂತೆ ಮಗು  ಪೋಷಕರು ಶಿಕ್ಷಕರು  ಮುಖ್ಯಗುರುಗಳು ಅಧಿಕಾರಿಗಳ ಕೊಂಡಿ ಸಧೃಢವಾಗಿದೆ. ಆತಂಕ ಬೇಡ ಮಹಾಮಾರಿಯೊಂದಿಗೆ ಬದುಕಿ ಅದನ್ನು ಸೋಲಿಸೋಣ ಬೆಳೆಯೋಣ.

Comments